ಸೀತಮ್ಮ ಬಂದಳು...!!!
ಈ ಹಿಂದೆ ಅಮೃತಗಳಿಗೆ ಎಂಬ ಚಿತ್ರ ಮಾಡಿ ಯಶಸ್ವಿ ಕಂಡಿದ್ದ ನಿರ್ದೇಶಕ ಅಶೋಕ್ ಕಡಬ ಅವರ ' ಸೀತಮ್ಮ ಬಂದಳು ಸಿರಿಮಲ್ಲಿಗೆ ತೊಟ್ಟು'.ಇದು 90 ರ ದಶಕದಲ್ಲಿ ನಡೆಯುವ ವಿಧವೆ ಕಥೆ...ಹೆಣ್ಣು ವಿಧಿವೆಯಾದಗ ಸಮಾಜ ನೋಡುವ ರೀತಿ. ಆಕೆಯ ಕಟ್ಟು ಪಾಡುಗಳ ನೀತಿ...ಗೆ ತನ್ನೆಲ್ಲ ಆಸೆ, ಆಕಾಂಕ್ಷಗಳ ಮನದಲ್ಲಿ ಅದುಮಿಟ್ಟುಕೊಂಡು ಬದುಕು ಹೆಣ್ಣಿನ ತಳಮಳ, ತಲ್ಲಣಗಳ ಚಿತ್ರಣವಿದೆ. ಗಂಡ ಇಲ್ಲದ ಹೆಣ್ಣು ದೈಹಿಕವಾಗಿ, ಮಾನಸಿಕವಾಗಿ ನರಳುತ್ತಾಳೆ. ತನ್ನ ಮನಸ್ಸಿಗೆ ಬಂದಂತೆ ನಡೆದುಕೊಂಡರೆ ಆಚಾರ, ವಿಚಾರ ಅಡ್ಡ. ದೈಹಿಕ ಖುಷಿಯೂ ಒಂದು ಅಪರಾಧ ಎನ್ನುಂತೆ ಬಿಂಬಿತವಾಗಿರುವ ಸಮಾಜದಲ್ಲಿ ಆಕೆಗೂ ಕನಸುಗಳು ಇವೆ. ಭಾವನೆಗಳು ಇವೆ ಎಂದು ಅಶೋಕ ಕಡಬ ತೋರಿಸಿದ್ದಾರೆ.
ಈ ಸಮಾಜದಲ್ಲಿ ಹೆಂಡತಿ ಸತ್ತರೆ ಗಂಡ ಬೇರೆ ಮದುವೆಯಾಗಬಹುದು. ಆದರೆ ಹೆಣ್ಣು ವಿಧವೆಯಾದರೆ ಬೇರೆ ಮದುವೆಯಾಗಲು ಹೆಚ್ಚಿನ ಜನರು ಬೆಂಬಲ ನೀಡುವುದಿಲ್ಲ ಇಂತಹ ಸಮಸ್ಯೆಗೆ ಸಿಲುಕಿನ ಹೆಣ್ಣಿನ ಮನಮಿಡಿಯುವ ನೋವಿನ ಕಥೆಯನ್ನು ಚಿತ್ರ ಹೇಳಲಾಗಿದೆ.
ವಿಧವೆ ಮಾತ್ರದಲ್ಲಿ ಗುರುತಿಸಿಕೊಂಡಿರುವ ಸಂಹಿತಾ ವಿನ್ಯಾ ಈ ಮೊದಲು ಗ್ಲಾಮರ್ ಪಾತ್ರಗಳಲ್ಲಿ ಹೆಚ್ಚು ಕಾಣಿಸಿಕೊಂಡಿದ್ದರು. ಮೊದಲ ಬಾರಿಗೆ ಡಿ ಗ್ಲಾಮರ್ ರೋಲ್ ಪಾತ್ರ ನಿರ್ವಹಿಸಿದ್ದಾರೆ. ತನ್ನ ಪಾತ್ರವನ್ನು ತುಂಬಾ ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಅದರಲ್ಲೂ 90 ದಶಕದ ವಾತರವಾರಣವನ್ನು ಚೆನ್ನಾಗಿ ಚಿತ್ರಿಸಲಾಗಿದೆ. ಇದು ಮಹಿಳೆಯರಿಗೆ ಇಷ್ಟವಾಗುವಂತ ಚಿತ್ರವಾಗಿದ್ದರಿಂದ ಮಹಿಳೆಯರು ನೋಡಲೇಬೇಕು.
No comments:
Post a Comment