Friday, 6 January 2017

ಗಾಂಧೀನಗರ ಚಲನಚಿತ್ರೋತ್ಸವ

ಚಲನಚಿತ್ರೋತ್ಸವಗಳು ಗಾಂಧಿನಗರಕ್ಕೆ ಹೊಸದಲ್ಲ. ಆದರೆ ಗಾಂಧಿನಗರ ಹೆಸರಿನಲ್ಲೇ ಕಳೆದ ನಾಲ್ಕು ವರ್ಷಗಳಿಂದ ಚಲನಚಿತ್ರೋತ್ಸವ ನಡೆದುಕೊಂಡು ಬರುತ್ತಿದೆ. ಈಗ ಐದನೇ 'ಗಾಂಧಿನಗರ ಚಲನಚಿತ್ರೋತ್ಸ'ವಕ್ಕೆ ನವೆಂಬರ್ 10ರಂದು ಚಾಲನೆ ನೀಡಲಾಯಿತುಗಾಂಧಿನಗರ ಶಾಸಕ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಕನ್ನಡ ಸಿನಿಮಾ ತಾರೆಗಳ ಸಮ್ಮುಖದಲ್ಲಿ ಚಲನಚಿತ್ರೋತ್ಸವ ವರ್ಣರಂಜಿತವಾಗಿ ಆರಂಭವಾಯಿತು. ಕನ್ನಡ ಚಿತ್ರಗಳ ಕ್ರಿಯಾಶೀಲ ನಿರ್ದೇಶಕ ಹಾಗೂ ಸಾಹಿತಿ ಬಿ ಸುರೇಶ್ ಅವರು ಗಾಂಧಿನಗರ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದರು.ಮಹಾರಾಷ್ಟ್ರ ಮಂಡಲ್ ಸಭಾಂಗಣದಲ್ಲಿ ಚಲನಚಿತ್ರಗಳನ್ನು ಪ್ರದರ್ಶಿಸಲಾಗುತ್ತದೆ. ಪುಟ್ಟಕ್ಕನ ಹೈವೆ, ಕನಸೆಂಬ ಕುದುರೆಯನೇರಿ, ಮೈ ನೇಮ್ ಈಸ್ ಕಲಾಂ.  ಸೇರಿದಂತೆ ಹಲವು ಚಲನಚಿತ್ರಗಳು ಪ್ರದರ್ಶಿಸಲಾಗಿದೆ. ಕೆ ಅಶೋಕ್ ಕಡಬ, ಕೆಬಿ ಶಿವಕುಮಾರ್ ಹಾಗೂ ಕೆವಿ ವೆಂಕಟೇಶ್ ಈ ಚಲನಚಿತ್ರೋತ್ಸವದ ರೂವಾರಿಗಳು.

No comments:

Post a Comment