ಸ್ಯಾಂಡಲ್ ವುಡ್ ನಲ್ಲಿ ಒಂದು ಚಿತ್ರ ಯಶಸ್ವಿಯಾಗಿ ಉತ್ತಮ ಪ್ರದರ್ಶನ ಕಾಣುವುದು ಬಲು ಅಪರೂಪವಾಗಿದೆ. ಬಹುತೇಕ ಚಿತ್ರಗಳು ಬಂದ ಮೊದಲ ವಾರದಲ್ಲಿ ಹೊರಟು ಹೋಗುತ್ತದೆ.
ಆದರೆ ಅವೆಲ್ಲವನ್ನು ಮೆಟ್ಟಿ “ಅಮೃತ ಘಳಿಗೆ” ಎಂಬ ಚಿತ್ರ ಪ್ರೇಕ್ಷಕರಿಂದ ಪ್ರಶಂಸೆಯನ್ನು ಪಡೆದ ಈಗ 50 ನೇ ದಿನ ಪೂರೈಸಿ ಯಶಸ್ವಿಯಾಗಿ ಸಾಗುತ್ತಿದೆ. ಸುಂದರ ಮಲೆನಾಡಿನಲ್ಲೋಂದು ಅಪರೂಪದ ದೃಶ್ಯ ಮೂಲಕ ಅಶೋಕ್ ಕಡಬ ಸಿನಿ ಪ್ರಿಯರ ಮನಸ್ಸನ್ನು ಗೆದ್ದಿದ್ದಾರೆ..
ಶ್ರೀ ಬನಶಂಕರಿ ಫಿಲಂಸ್ ಲಾಂಛನದಲ್ಲಿ ರಾಜಶೇಖರ್ ಎಸ್.ಎನ್ ನಿರ್ಮಿಸಿ , ನಟಿಸಿರುವ “ಅಮೃತ ಘಳಿಗೆ” ಚಿತ್ರವನ್ನು ಅಶೋಕ್ ಕಡಬ ಕಥೆ , ಚಿತ್ರಕಥೆ ಬರೆದು ನಿರ್ದೇಶಿಸಿ ಸೈ ಎನಿಸಿಕೊಂಡಿದ್ದಾರೆ.
ಈ ಚಿತ್ರಕ್ಕೆ ಯುವ ಸಂಗೀತ ನಿರ್ದೇಶಕ ಕಾರ್ತಿಕ್ ವೆಂಕಟೇಶ್ ರಾಗ ಸಂಯೋಜನೆ ಕೇಳುಗರ ಗಮನ ಸೆಳೆದಿತ್ತು , ಅದೇ ರೀತಿ ಅರುಣ್ ಕುಮಾರ್ ಕ್ಯಾಮೆರಾ ಕೈಚಳಕದ ಮೂಲಕ ಸುಂದರ ದೃಶ್ಯ ಕಾಣಬಹುದಾಗಿದೆ.
ಈ ಚಿತ್ರದಲ್ಲಿ ಹಿರಿಯ ನಟ ದತ್ತಣ್ಣ , ನೀತು , ಸಮಿತ ವಿನ್ಯ , ಶೃಂಗೇರಿ ರಾಮಣ್ಣ , ಹಿರಿಯ ನಟಿ ಪದ್ಮಾ ವಾಸಂತಿ , ನಿರ್ಮಾಪಕ ರಾಜಶೇಖರ ಶೇಖರ್ ಸೇರಿದಂತೆ ಹಲವಾರು ಕಲಾವಿದರು ಉತ್ತಮವಾಗಿ ಅಭಿನಯಿಸಿದ್ದಾರೆ.
ಈ ಮೂಲಕ ಕನ್ನಡದ ಯಶಸ್ವಿ ನಿರ್ದೇಶಕರ ಸಾಲಿಗೆ ಅಶೋಕ್ ಕಡಬ ಸೇರ್ಪಡೆ